Adipurush Movie Teaser : ಆದಿಪುರುಷ ಸಿನಿಮಾ ಟೀಸರ್ ರಿಲೀಸ್ : ಉಘೇ ಉಘೇ ಎಂದ ಫ್ಯಾನ್ಸ್

ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಆದಿಪುರುಷದ ಟೀಸರ್ ಬಿಡುಗಡೆಯಾಗಿದೆ. 

Written by - Channabasava A Kashinakunti | Last Updated : Oct 2, 2022, 08:38 PM IST
  • ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಆದಿಪುರುಷ
  • ಆದಿಪುರುಷ ಸಿನಿಮಾ ಟೀಸರ್ ಬಿಡುಗಡೆ
  • ಆದಿಪುರುಷ ಜನವರಿ 12, 2023 ರಂದು ಬಿಡುಗಡೆಯಾಗಲಿದೆ.
Adipurush Movie Teaser : ಆದಿಪುರುಷ ಸಿನಿಮಾ ಟೀಸರ್ ರಿಲೀಸ್ : ಉಘೇ ಉಘೇ ಎಂದ ಫ್ಯಾನ್ಸ್ title=

Adipurush Teaser Updates : ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಆದಿಪುರುಷ ಟೀಸರ್ ಬಿಡುಗಡೆಯಾಗಿದೆ. ಈ ಸಿನಿಮಾವು ಕನ್ನಡ, ತಮಿಳು, ತೆಲಗು, ಹಿಂದಿ, ಮಾಲಿಯಾಳಂ ಸೇರಿ ಒಟ್ಟು  5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯುವ ಮೆಗಾ ಸಮಾರಂಭದಲ್ಲಿ ಅಧಿಕೃತವಾಗಿ ಟೀಸರ್ ಬಿಡುಗಡೆ ಮಾಡಲಾಗಿದೆ. ನಟ ಪ್ರಭಾಸ್, ನಟಿ ಕೃತಿ ಸನೋನ್, ನಿರ್ಮಾಪಕ ಭೂಷಣ್ ಕುಮಾರ್ ಮತ್ತು ನಿರ್ದೇಶಕ ಓಂ ರಾವುತ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಆದಿಪುರುಷ ಜನವರಿ 12, 2023 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ : ಭರ್ಜರಿ ಪ್ರಚಾರದಲ್ಲಿ ಡಾಲಿ : ʼಹೆಡ್‌ ಬುಷ್‌ ʼ ಆಡೋಕೆ ನಟರಾಕ್ಷಸ ತಯಾರಿ..!

ಸಿನಿಮಾ ಪ್ರಚಾರದ ಆರಂಭಕ್ಕೆ ಆದಿಪುರುಷ ನಿರ್ಮಾಪಕರು ಶ್ರೀ ರಾಮನ ಜನ್ಮಸ್ಥಳವದ ಅಯೋಧ್ಯದಲ್ಲಿ ಮೆಗಾ ಈವೆಂಟ್ ಅನ್ನು ಯೋಜಿಸಿದ್ದಾರೆ. ಈ ವಾರದ ಆರಂಭದಲ್ಲಿ ಪ್ರಭಾಸ್ ಅವತಾರದ ಭಗವಾನ್ ರಾಮನ 
ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿದ್ದರು. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ, ಪ್ರಭಾಸ್, ಶ್ರೀ ರಾಮನ ವೇಷದಲ್ಲಿ, ಸಿಡಿಲು ಬಡಿದು ಗುಡುಗುವ ಅಲೆಗಳು ದಡವನ್ನು ಚಿಮ್ಮುತ್ತಿದ್ದಂತೆ ಆಕಾಶದತ್ತ ತನ್ನ ಬಾಣವನ್ನು ಗುರಿಯಾಗಿಸಿಕೊಂಡಿರುವ ದನ್ನ ಕಾಣಬಹುದಾಗಿದೆ.

Step into the word of #Adipurush 🏹#AdipurushInAyodhya #AdipurushTeaser

Hindi: https://t.co/fJvfkyTyW6
Telugu: https://t.co/QwywvI5cpR
Tamil: https://t.co/FEi0nJjJhV
Kannada: https://t.co/VXrSiQyvyv
Malayalam: https://t.co/BFf4qki2ur#Prabhas @omraut #SaifAliKhan @kritisanon pic.twitter.com/oEPLA5bYW8

— Prabhas (@PrabhasRaju) October 2, 2022

"ಕೆಟ್ಟ ಮೇಲೆ ಒಳಿತಿನ ವಿಜಯ" ವನ್ನು ಆಚರಿಸುವ ಸಿನಿಮಾ ಎಂದು ಹೇಳಲಾಗಿದ್ದು, ಆದಿಪುರುಷದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸನ್ನಿ ಸಿಂಗ್ ಸಹ ನಟಿಸಿದ್ದಾರೆ.

ಇದನ್ನೂ ಓದಿ : "ನಾವೆಲ್ಲರೂ ಒಟ್ಟುಗೂಡಿದರೆ ನಾವು ₹ 3000-4000 ಕೋಟಿಗಳನ್ನು ದಾಟಬಹುದು"

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News